ಪಂಜಾಬಿಗಳು ಅನೇಕ ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳೆಲ್ಲವೂ ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಜಾತ್ಯತೀತ ರೂಪಪಡೆದು ಸಾಂಸ್ಕೃತಿಕ ಆಚರಣೆಗಾಗಿ ಎಲ್ಲಾ ಧರ್ಮಗಳ ಜನರಿಂದ ಆಚರಿಸಲ್ಪಡುತ್ತವೆ. ಹಬ್ಬಗಳ ಆಚರಣೆಗೆ ದಿನಗಳು ಪಂಜಾಬಿ ಕ್ಯಾಲೆಂಡರ್‍ನ ಆಧಾರದಲ್ಲಿ ನಡೆಯುತ್ತವೆ. ಈ ಕೆಳಗಿನವು ಪಂಜಾಬಿ ಹಬ್ಬಗಳ ಪಟ್ಟಿ. == ಪಂಜಾಬಿ ಹಬ್ಬಗಳು == === ಮಾಘಿ === ಮಕರ ಸಂಕ್ರಾಂತಿ ಹಬ್ಬವು ಪಂಜಾಬಿಗರಲ್ಲಿ 'ಮಾಘಿ' ಎಂಬ ಹೆಸರಿನಿಂದ ಆಚರಿಸಲ್ಪಡುತ್ತದೆ. ಜನರು ಗುರುದ್ವಾರ ಅಥವ ಗುಡಿಗಳಿಗೆ ಭೇಟಿ ನೀಡುತ್ತಾರೆ. ಹಾಲಿನಲ್ಲಿ ಕುದಿಸಿ ಮಾಡಿದ ಅಕ್ಕಿಯ ಖೀರು ಆ ದಿನದ ವಿಶೇಷ ತಿನಿಸು. ಈ ಸಂದರ್ಭದಲ್ಲಿ ಅನೇಕ ಕ್ರೀಡಾ ಆಚರಣೆಗಳು ನಡೆಯುತ್ತವೆ. === ಲೋಹ್ರಿ === ಲೋಹ್ರಿಯು ಪಂಜಾಬ್ ಪ್ರಾಂತ್ಯದ ಚಳಿಗಾಲದ ಸುಗ್ಗಿ ಹಬ್ಬ. ಚಳಿಗಾಲದಲ್ಲಿ ಕಬ್ಬಿನ ಸುಗ್ಗಿಯ ಸಮಯ. ಇದು ಚಳಿಗಾಲದ ಮಕರ ಸಂಕ್ರಾಂತಿಯ (ವರ್ಷದಲ್ಲಿನ ಅತ್ಯಂತ ಕಡಿಮೆ ಹಗಲುಳ್ಳ ದಿನ) ಸಾಂಕೇತಿಕ ಆಚರಣೆಯೂ ಆಗಿದೆ. ಇದು ರೈತರ ಆರ್ಥಿಕ ವರ್ಷದ ಕೊನೆಯ ದಿನ. === ವಸಂತ ಹಬ್ಬ (ಬಸಂತ್ ಗಾಳಿಪಟದ ಹಬ್ಬ) === ವಸಂತ ಋತುವಿನ ಸ್ವಾಗತಕ್ಕಾಗಿ ಇದನ್ನು ಆಚರಿಸಲಾಗುತ್ತದೆ. ಹಳದಿ ಬಣ್ಣ ಆ ದಿನಾಚರಣೆಯ ಸಾಂಪ್ರದಾಯಿಕ ಬಣ್ಣವಾಗಿದ್ದು, ಕೇಸರಿ ಅನ್ನ ಆ ದಿನದ ವಿಶೇಷ ತಿನಿಸಾಗಿರುತ್ತದೆ. === ಹೋಳಿ === ಹೋಳಿ ಹಬ್ಬ ಬಣ್ಣಗಳ ಹಬ್ಬವಾಗಿದ್ದು ಪರಸ್ಪರ ಬಣ್ನಗಳನ್ನು ಎರಚಿಕೊಂಡು ಆಚರಿಸಲ್ಪಡುತ್ತದೆ. ಇದು ಪಂಜಾಬಿ ಚಾಂದ್ರಮಾನ ಕ್ಯಾಲೆಂಡರ್‍ನ ಮೊದಲ ಮಾಸವಾದ ಚೇತ್‍ನ ಮೊದಲ ದಿನದಂದು ಆಚರಿಸಲ್ಪಡುತ್ತದೆ ಮತ್ತು ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ. === ವೈಶಾಖಿ === ಇದು ಪಂಜಾಬಿ ಹೊಸವರ್ಷ ಮತ್ತು ಸುಗ್ಗಿಯ ಹಬ್ಬ. ಈದಿನದಂದು ಪಂಜಾಬಿನೆಲ್ಲೆಡೆ ಜಾತ್ರೆಗಳ ನಡೆಯುತ್ತವೆ. === ರಾಖ್ರಿ === ಅಣ್ಣ-ತಂಗಿಯರ ಹಬ್ಬವಾದ ರಕ್ಷಾ ಬಂಧನ ಹಬ್ಬವು ಪಂಜಾಬಿನಲ್ಲಿ 'ರಾಖ್ರಿ' ಎಂಬ ಹೆಸರಿನಿಂದ ಆಚರಿಸಲ್ಪಡುತ್ತದೆ. === ತೀಯಾ (ತೀಜ್) === ಈ ಹಬ್ಬದಲ್ಲಿ ಹುಡುಗಿಯರು ಮರಗಳಿಗೆ ಕಟ್ಟಿರುವ ಜೋಕಾಲಿಗಳನ್ನು ಆಡುವುದರ ಮೂಲಕ ಆಚರಿಸುತ್ತಾರೆ. ಇದು ಮುಂಗಾರನ್ನು ಸ್ವಾಗತಿಸುವ ಹಬ್ಬ. ಈ ಆಚರಣೆಯು ತೀಜ್ ದಿನದಿಂದ ಆರಂಭವಾಗಿ ಹದಿಮೂರು ದಿನಗಳ ಕಾಲ ನಡೆಯುತ್ತದೆ. ಹುಡುಗಿಯರು ಮತ್ತು ಹೆಂಗಸರು 'ಗಿಧಾ' ನೃತ್ಯವನ್ನು ಮಾಡುತ್ತಾರೆ ಮತ್ತು ಬಂಧು ಬಳಗವನ್ನು ಭೇಟಿ ಮಾಡುತಾರೆ. == ಉಲ್ಲೇಖಗಳು == == ಹೊರಕೊಂಡಿಗಳು ==